ಟೆಲಿಸ್ಕೋಪಿಯಮ್
ಆಕಾಶದ 88 ನಕ್ಷತ್ರಪುಂಜಗಳ (ಕಾನ್ಸ್‍ಟೆಲ್ಲೇಷನ್ಸ್) ಪೈಕಿ ಒಂದು. ದಕ್ಷಿಣಾರ್ಧಗೋಳದಲ್ಲಿರುವ ಒಂದು ಕ್ಷೀಣಪುಂಜ. ಇದರ ವ್ಯಾಪ್ತಿ 18 ಗಂಟೆ 5 ಮಿ. ಮತ್ತು 20 ಗಂಟೆ 25 ಮಿ. ವಿಷುವದಂಶಗಳ (ರೈಟ್ ಅಸೆನ್ಮನ್ಸ್) ನಡುವೆಯೂ-460  ಮತ್ತು -570  ಘಂಟಾವೃತ್ತಾಂಶಗಳ (ಡೆಕ್ಲಿನೇಶನ್) ನಡುವೆ ನೆಲೆಸಿರುವ ಇದನ್ನು ದೂರದರ್ಶಿನಿ ಎಂದು ಅನುವಾದಿಸಲಾಗಿದೆ. ದಕ್ಷಿಣದ ನಕ್ಷತ್ರಪುಂಜಗಳನ್ನು ಮೊದಲು ಗುರುತಿಸಿ ಹೆಸರಿಸಿದವರು ಯುರೋಪಿಯನ್ ನೌಕಾಯಾತ್ರಿಗಳು. ಆದ್ದರಿಂದ ಅವರು ಬಳಸುತ್ತಿದ್ದ ವಸ್ತುಗಳ ಹೆಸರನ್ನೇ ನಕ್ಷತ್ರಪುಂಜಗಳಿಗೂ ಇಟ್ಟರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ